Dr. Rajkumar Academy for Civil Services is happy to announce its second edition of SCHOLARSHIP EXAM. Our academy started with the motto of providing excellence and service to the people of Karnataka. In continuation of the same, this year on 4th March we are conducting the scholarship exam and trying to cater to needy aspirants across the state. The exam is conducted with the novel objective and realizing the epitomizing spirit of our beloved Dr. Rajkumar. Aspirants across the state are instructed to make use of the initiative effectively.
Please note the instructions:
- Only students who are BPL card holders or income certificate with annual income less than 2lakh per annum will be eligible for the scholarship.
- Kindly register only once and authenticate yourself with a valid Aadhar number.
- Kindly note only appearing for the exam will not guarantee the scholarship.
- The scholarship will vary based on the performance in the exam, educational credentials and personal interview.
- It is also has to be clearly noted that scholarship is a onetime support with respect to course fees. There will be no monthly stipend or any other assistance in monetary terms.
- The academy will not provide any accommodation facilities to the selected aspirants. This has to be arranged by the aspirants themselves.
- Only students who have completed a graduation or in the final year of graduation will be eligible for the Scholarship exam.
- Scholarship exam will be conducted on 4th March, 2018. Venue and timings of the exam will be mentioned in your admission ticket which will be sent to your registered e-mail.
- Syllabus and Pattern of scholarship exam-
- Scholarship examination consists of one general studies paper which will be of objective(MCQs) type.
- Paper will be of 2 hour duration.
- No. of questions - 100. Each question will be for 2 marks.
- Total marks is 200.
- Question paper will be set both in Kannada and English Medium.
- Syllabus - Current Affairs, Indian History, Geography, Indian Polity, Economics, General Science and General Mental Ability.
NOTE : There will be negative marking of 1/4th of the marks alloted for all incorrect answers
ಡಾ|| ರಾಜ್ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯು ತನ್ನ ಎರಡನೇ ಆವೃತ್ತಿಯ ಸ್ಕಾಲರ್ಶಿಪ್ ಪರೀಕ್ಷೆಯನ್ನು
ನಡೆಸಲು ಉತ್ಸುಕವಾಗಿದೆ. ಕರ್ನಾಟಕದ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ
ಉದ್ದೇಶದೊಂದಿಗೆ ನಮ್ಮ ಅಕಾಡೆಮಿಯು ಪ್ರಾರಂಭಗೊಂಡಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ
ದಿಶೆಯಲ್ಲಿ ಇದೇ ಮಾರ್ಚ್ 4ರಂದು ನಾವು ಸ್ಕಾಲರ್ಶಿಪ್ ಪರೀಕ್ಷೆಯನ್ನು ಆಯೋಜಿಸಿದ್ದೇವೆ. ಈ ಪರೀಕ್ಷೆಯು
ನಮ್ಮಲ್ಲೆರ ಅಚ್ಚುಮೆಚ್ಚಿನ ಡಾ||ರಾಜ್ಕುಮಾರ್ರವರ ಆಶಯಗಳನ್ನು ಸಾಕಾರಗೊಳಿಸುವ ಒಂದು ವಿನೂತನ
ಪ್ರಯತ್ನ. ಆದ್ದರಿಂದ ನಮ್ಮ ರಾಜ್ಯದ ಆಕಾಂಕ್ಷಿಗಳು ಇದರ ಸದುಪಯೋಗವನ್ನು ಪರಿಣಾಮಕಾರಿಯಾಗಿ
ಬಳಸಿಕೊಳ್ಳಲು ಸೂಚಿಸಲಾಗಿದೆ.
ದಯವಿಟ್ಟು ಈ ಸೂಚನೆಯನ್ನು ಪಾಲಿಸಿ.
- ಬಿಪಿಲ್ ಕಾರ್ಡ್ ಹೊಂದಿರುವ ಅಥವಾ ವಾರ್ಷಿಕ ರೂ 2 ಲಕ್ಷಕ್ಕಿಂತ ಕಡಿಮೆ ಆದಾಯ ಪ್ರಮಾಣ ಪತ್ರ ಹೊಂದಿರುವ
ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಲು ಆರ್ಹರಾಗಿರುತ್ತಾರೆ.
- ಈ ಪರೀಕ್ಷೆಗೆ ಆಧಾರ್ ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಒಮ್ಮೆ ಮಾತ್ರ ನೋಂದಾಯಿಸಿಕೊಳ್ಳಬೇಕು.
- ಸ್ಕಾಲರ್ಶಿಪ್ನ ಪ್ರಮಾಣವು, ವಿದ್ಯಾರ್ಥಿಯು ಈ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು, ಅವರ ಶೈಕ್ಷಣಿಕ ಅರ್ಹತೆ ಮತ್ತು
ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ.
- ಈ ಪರೀಕ್ಷೆಯಲ್ಲಿ ಹಾಜರಾದ ಮಾತ್ರಕ್ಕೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ನ ಖಾತ್ರಿಯಿರುವುದಿಲ್ಲ.
- ಈ ಸ್ಕಾಲರ್ಶಿಪ್ ನಮ್ಮ ಸಂಸ್ಥೆಯ ವತಿಯಿಂದ ನೀಡುವ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿಯ ಶುಲ್ಕವಾಗಿರುತ್ತದೆ
(ಒಮ್ಮೆ ಮಾತ್ರ). ಯಾವುದೇ ರೀತಿಯ ಹಣಕಾಸಿನ ಸಹಾಯ ಅಥವಾ ಮಾಸಿಕ ವಿದ್ಯಾರ್ಥಿವೇತನ ಸೌಲಭ್ಯವಿರುವುದಿಲ್ಲ.
- ಅಕಾಡೆಮಿಯ ವತಿಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ವಸತಿ ಸೌಕರ್ಯಗಳನ್ನು
ಒದಗಿಸುವುದಿಲ್ಲ. ಇದನ್ನು ಆಕಾಂಕ್ಷಿಗಳೇ ವ್ಯವಸ್ಥೆ ಮಾಡಿಕೊಳ್ಳಬೇಕು.
- ಈ ಪರೀಕ್ಷೆಗೆ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಥವಾ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ.
- ಸ್ಕಾಲರ್ಶಿಪ್ ಪರೀಕ್ಷೆಯನ್ನು ಮಾಚ್೯ 4, 2018 ರಂದು ನಡೆಸಲಾಗುವುದು. ನಿಮ್ಮ ಪ್ರವೇಶ ಪತ್ರದಲ್ಲಿ ಪರೀಕ್ಷೆ ನಡೆಯುವ ಸ್ಥಳ ಮತ್ತು ಸಮಯವನ್ನು ತಿಳಿಸಲಾಗುವುದು ಮತ್ತು ಪ್ರವೇಶ ಪತ್ರವನ್ನು ನಿಮ್ಮ ನೋಂದಾಯಿತ ಇಮೇಲ್ ಗೆ ಕಳುಹಿಸಲಾಗುತ್ತದೆ.
- ಸ್ಕಾಲರ್ಶಿಪ್ ಪರೀಕ್ಷೆಯ ಪಠ್ಯಕ್ರಮ-
- ಸ್ಕಾಲರ್ಶಿಪ್ ಪರೀಕ್ಷೆ ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಪತ್ರಿಕೆ ವಸ್ತು ನಿಷ್ಠ ಮಾದರಿಯಲ್ಲಿ ಇರುತ್ತದೆ.
- ಪರೀಕ್ಷೆಯ ಅವಧಿ - 2 ಘಂಟೆಗಳು.
- ಪ್ರಶ್ನೆಗಳ ಸಂಖ್ಯೆ- 100
- ಪ್ರತಿ ಪ್ರಶ್ನೆಗೆ ಅಂಕಗಳು - 2
- ಒಟ್ಟು ಅಂಕಗಳು - 200
- ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಇರುತ್ತವೆ.
- ಪಠ್ಯಕ್ರಮ - ಪ್ರಚಲಿತ ವಿದ್ಯಮಾನಗಳು, ಭಾರತೀಯ ಇತಿಹಾಸ, ಭೂಗೋಳ ಶಾಸ್ತ್ರ, ಭಾರತದ ರಾಜಕೀಯ ಮತ್ತು ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಮಾನಸಿಕ ಸಾಮಥ್ಯ೯.
ಸೂಚನೆ- ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಆ ಪ್ರಶ್ನೆಗೆ ಮೀಸಲಾದ ಅಂಕಗಳಲ್ಲಿ (1/4) ರಷ್ಟು ಅಂಕಗಳನ್ನು ಕಳೆಯಲಾಗುವುದು.